ಅಡುಮರೋಳಿ ಪರಿಸರದಲ್ಲಿ 8-4-2021 ರಂದು ಎಸ್.ಸಿ.ಎಸ್ ಅಸ್ಪತ್ರೆಯ ಡಾ.ಜೀವರಾಜ್ ಸೊರಕೆ ಹಾಗೂ ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್‌ ಕುಮಾರ್ ರವರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಸಹಕಾರದ ಅಕ್ಷಯ ಯೋಜನೆ ಆಹಾರ ಕಿಟ್ ಗಳನ್ನು ಇಸ್ಕಾನ್ ಸಂಸ್ಥೆಯ ಕಾರ್ಯದರ್ಶಿ ಶ್ರೀ.ಶ್ರೀ ಸನಂದನದಾಸ ಸ್ವಾಮೀಜಿಯವರಿಂದ ಅಡುಮರೋಳಿ ಪರಿಸರದಲ್ಲಿ ಅರ್ಹ ಕುಟುಂಬಗಳಿಗೆ ಉಚಿತ ಕಿಟ್ ಗಳನ್ನು ವಿತರಿಸಲಾಯಿತು. ಅಡುಮರೋಳಿ ಶ್ರೀ ಮಾರಿಕಾಂಬ ದೇವಸ್ಥಾನದ ಅರ್ಚಕರಾದ ರವಿಶಾಂತಿ, ಆಡಳಿತ ಮೊಕ್ತೇಸರರಾದ ಚಂದ್ರಹಾಸ ಮೇಗಿನಮನೆ, ಮಾಜಿ ಮೇಯರ್ ವಿಜಯ ಅರುಣ್, ಡಾ.ಅನಸೂಯ ಬಿ.ಸಾಲ್ಯಾನ್ , ಕೆ.ಎ.ರೋಹಿಣಿ, ಸುಜಾತಸುವರ್ಣ, ರೋಹಿಣಿ ಡಿ.ಅಂಚನ್, ಶ್ರೀಲತಗೋಪಾಲಕೃಷ್ಣ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.