ವಿಶ್ವ ಬಿಲ್ಲವ ಮಹಿಳಾ ಸಂಘದ ವತಿಯಿಂದ ಅಷ್ಟಮಿ ಪ್ರಯುಕ್ತ ಆಹಾರ ದವಸ -ಧಾನ್ಯಗಳ ಕಿಟ್ ವಿತರಣೆ

ಹಿಂದೂಗಳ ಪವಿತ್ರ ಹಬ್ಬವಾದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿಶ್ವ ಬಿಲ್ಲವ ಮಹಿಳಾ ಸಂಘವು ಕಳೆದ ನಾಲ್ಕು ವರುಷಗಳಿಂದ ಅಷ್ಟಮಿ ಹಬ್ಬಕ್ಕೆ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನೊಳಗೊಂಡ ಕಿಟ್ ಗಳನ್ನು ಹಿರಿಯರ ಸಂಪ್ರದಾಯ ಕ್ರಮಗಳನ್ನು ನೆನೆಪಿಸಿಕೊಂಡು ನೀಡುತ್ತಾ ಬಂದಿರುತ್ತಾರೆ. ಈ ವರ್ಷವು ಅಷ್ಟಮಿ ಹಬ್ಬಕ್ಕೆ ಅಗತ್ಯವಿರುವ ಆಹಾರಧಾನ್ಯಗಳನ್ನು ಒಳಗೊಂಡ ಕಿಟ್ ಗಳನ್ನು ಅಡುಮರೋಳಿ, ಬಜಾಲ್, ಮೂಡುಶೆಡ್ಡೆ ಪರಿಸರದ ಅರ್ಹ ಕುಟುಂಬಗಳಿಗೆ ಸಂಘದ ಅಧ್ಯಕ್ಷೆ ಶ್ರೀಮತಿ ಉರ್ಮಿಳಾ ರಮೇಶ್, ಉಪಾಧ್ಯಕ್ಷೆ ಶ್ರೀಮತಿ ವಿಜಯ ಅರುಣ್, ಪ್ರಧಾನ ಕಾರ್ಯದರ್ಶಿ ಸುಜಾತ ಸುವರ್ಣ ಇವರುಗಳ ಉಪಸ್ಥಿತಿಯಲ್ಲಿ ನೀಡಲಾಯಿತು.

ಶ್ರೀಮತಿ ಉರ್ಮಿಳಾ ರಮೇಶ್ ಇವರ ನೇತೃತ್ವದಲ್ಲಿ ವಿಶ್ವ ಬಿಲ್ಲವ ಮಹಿಳಾ ಸಂಘವು ಬಡವರನ್ನು ಗುರುತಿಸಿ ಸಹಾಯ ಮಾಡುತ್ತಾ ಉತ್ತಮವಾದ ರೀತಿಯಲ್ಲಿ ಮುನ್ನಡೆಯುತ್ತಿದೆ . ಅರ್ಹರನ್ನು ಹುಡುಕಿ ಅವರಿಗೆ ಪ್ರಯೋಜನ ಸಿಗುವ ಹಾಗೆ ಮಾಡುತ್ತಾ ಬಂದಿರುವ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸದಸ್ಯರು ಸಂತಸ ವ್ಯಕ್ತಪಡಿಸಿದರು.