ವಿಶ್ವ ಬಿಲ್ಲವ ಮಹಿಳಾ ಸಂಘ (ರಿ)
ಶ್ರೀ ಗೋಕರ್ಣಾನಾಥ ಕ್ಷೇತ್ರ ಕುದ್ರೋಳಿ
ಮಂಗಳೂರು-03
ಆತ್ಮೀಯರೇ,
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಪಾಲಿಸಿಕೊಂಡು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಾಲ್ಯದಿಂದಲೂ ಸೇವಾನಿರತರಾಗಿದ್ದು, ಶ್ರೀ ಕ್ಷೇತ್ರದ ಪರಮ ಭಕ್ತೆಯಾಗಿ, ಜಾತಿ,ಮತ,ಬೇಧವಿಲ್ಲದೆ. ಶ್ರೀ ಲಲಿತಾಭಜನಾಮಂಡಳಿಯನ್ನು ಮುನ್ನಡೆಸಿಕೊಂಡು, ಶ್ರೀ ಕ್ಷೇತ್ರದಲ್ಲಿ ಟ್ರಸ್ಟಿಯಾಗಿದ್ದು, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾಗಿ ಪ್ರಸ್ತುತ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿದ್ದು, ಯಶಸ್ವಿ ಮಹಿಳಾ ಉದ್ಯಮಿ, ಹೋಟೆಲ್ ದೀಪಾ ಕಂಫಟ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರು ಶ್ರೀ ಗೋಕರ್ಣಾನಾಥ ಕ್ಷೇತ್ರಕ್ಕೆ ಮಾತ್ರವಲ್ಲದೆ, ಅನೇಕ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ಪ್ರಚಾರವನ್ನು ಬಯಸದೇ ನಿಸ್ವಾರ್ಥ ಸೇವಾಮನೋಭಾವನೆಯಿಂದ ಹಲವಾರು ಕೊಡುಗೆಗಳನ್ನು ನೀಡುತ್ತಾ ಬಂದಿರುತ್ತಾರೆ. ಇಷ್ಟು ಮಾತ್ರವಲ್ಲದೆ ಸಮಾಜಮುಖಿ ಚಿಂತಕಿಯಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ತೀರಾ ಹಿಂದುಳಿದ ಕುಟುಂಬದ ಬಡ ಮಕ್ಕಳ ಶಿಕ್ಷಣಕ್ಕೂ ಜಾತಿ, ಭೇದವಿಲ್ಲದೆ ಹೆಚ್ಚಿನ ಒತ್ತು ನೀಡುತ್ತಾ, ತನ್ನ ಸಮಾಜ ಭಾಂಧವರು ರಾಜಕೀಯ ಕ್ಷೇತ್ರದಲ್ಲೂ ಮುಂಚೂಣಿಗೆ ಬರುವಂತಾಗಲೂ ತನ್ನ ಕೈಲಾದ ಸಹಾಯವನ್ನು ಸೇವಾ ರೂಪದಲ್ಲಿ ನೀಡುತ್ತಾ ಬಂದಿರುತ್ತಾರೆ. ಹಲವರಿಗೆ ಉದ್ಯೋಗಗಳನ್ನು ನೀಡಿದ ಇವರು ವಿಶೇಷವಾಗಿ ಮಹಿಳೆಯರು ತನ್ನ ಕಾಲ ಮೇಲೆ ನಿಂತು ಆರ್ಥಿಕವಾಗಿ ಬಲಾಢ್ಯರಾಗಲು ಸ್ವ ಉದ್ಯೋಗಗಳನ್ನು ಮಾಡಿಕೊಂಡು ಇರುವಂತಾಗಲು ಅವಕಾಶಗಳನ್ನು ಕಲ್ಪಿಸಿ ಸ್ವ ಉದ್ಯೋಗಿಗಳನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಯಾವುದೇ ಸುದ್ದಿ ಮಾಡದೆ ಜನ ಸೇವೆ ಮಾಡಿ, ಸೇವೆ ಮಾಡಿ ಸುದ್ದಿಯಾಗದೆ. ಸದ್ದಿಲ್ಲದೆ ಸೇವೆ ಮಾಡಬೇಕು ಎಂಬ ನಿಲುವನ್ನು ಹೊಂದಿದ ಇವರು ಯಾವುದೇ ಪ್ರಶಸ್ತಿ, ಪುರಸ್ಕಾರ, ಹೊಗಳಿಕೆಯಿಂದ ಬಹುದೂರವಿದ್ದರೂ ಸಹ ಇವರ ಸಮಾಜ ಸೇವೆಯನ್ನು ಗುರುತಿಸಿ ವೀರರಾಣಿ ಅಬ್ಬಕ್ಕ ಪ್ರಶಸ್ತಿಯೂ ಇವರನ್ನರಸಿ ಬಂದ ಸಂದರ್ಭದಲ್ಲಿ ಅದನ್ನ ನಯವಾಗಿ ತಿರಸ್ಕರಿಸಿದಾಗ ತನ್ನ ಮಹಿಳಾ ಬಳಗದ ಒತ್ತಾಯಕ್ಕೆ ಮಣಿದವರು ಎಂದರೆ ತಪ್ಪಾಗಲಾರದು. ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಲು ಮುಂದೆ ಬಂದಾಗ ಬಂದವರ ಮನ ನೋಯಿಸದೆ ತನಗೆ ನೀಡುವ ಸನ್ಮಾನಕ್ಕೆ ತಗಲುವ ವೆಚ್ಚವನ್ನು ಬಡವರಿಗೆ ನೀಡಿ ಎಂಬುದೆ ಇವರ ಸಲಹೆ ಇಂತಹ ವ್ಯಕ್ತಿತ್ವದವರು ಕಾಣ ಸಿಗುವುದೇ ತೀರಾ ವಿರಳ. ಸದಾ ಸಮಾಜಮುಖಿಯಾಗಿ ಚಿಂತಿಸುವ ಇವರು ಬ್ರಹ್ಮಶ್ರೀ ನಾರಾಯಣ ಗುರುಗಳು ಹೇಳಿದಂತೆ ” ಸಂಘಟನೆಯಿಂದ ಬಲಯುತರಾಗಿ” ಬಲಿಷ್ಟವಾದ ಸಮಾಜವನ್ನು ಕಟ್ಟಬೇಕು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವಾನಿರತರಾಗಬೇಕು. ನಮ್ಮ ಸಮಾಜದ ಎಲ್ಲಾ ಬಿಲ್ಲವ ಮಹಿಳೆಯರನ್ನು ಒಂದುಗೂಡಿಸಿ, ಸಮಾಜಮುಖಿ ಕೆಲಸ ಮಾಡುತ್ತಿರುವ ಎಲ್ಲಾ ಬಿಲ್ಲವ ಸಂಘಟನೆಗಳ ಮಹಿಳೆಯರು ಒಗ್ಗಟ್ಟಾಗಿ ಸಂಘಟನಾ ಶಕ್ತಿ ಮೂಲಕ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಲು , ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅವರ ಸರ್ವಾಂಗೀಣ ಪ್ರಗತಿಗಾಗಿ ಸಂದರ್ಭಾನುಸಾರ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು, ಅಶಕ್ತರಿಗೆ ಅರ್ಹ ಫಲಾನುಭವಿಗಳಿಗೆ ಶಿಕ್ಷಣ, ಆರೋಗ್ಯ ರಕ್ಷಣೆ, ಕುರಿತಂತೆ ಸಹಕರಿಸಲು ಹಾಗೂ ಸಮಾಜದ ಒಗ್ಗಟ್ಟಿಗೆ ಶ್ರಮಿಸುವ ನಿಟ್ಟಿನಲ್ಲಿ ಮಂಗಳೂರು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಕೇಂದ್ರಸ್ಥಾನವಾಗಿಟ್ಟುಕೊಂಡು ಸನ್ಮಾನ್ಯ ಶ್ರೀ ಜನಾರ್ದನ ಪೂಜಾರಿಯವರ ಸಲಹೆ-ಸೂಚನೆ-ಮಾರ್ಗದರ್ಶನದೊಂದಿಗೆ ವಿಶ್ವಾದಾದ್ಯಂತ ನೆಲೆಸಿರುವ ಮಹಿಳೆಯರನ್ನು ಸಂಘಟಿಸಿ ಸಂಪರ್ಕ-ಸಂಘಟನೆ-ಸಹಕಾರ ಎಂಬ ಧ್ಯೇಯದೊಂದಿಗೆ ಬಲವಾದ ಮಹಿಳಾ ಸಂಘವನ್ನು ರಚಿಸುವ ನಿಟ್ಟಿನಲ್ಲಿ ವಿಶ್ವಬಿಲ್ಲವ ಮಹಿಳಾ ಸಂಘವೂ ಅಸ್ತಿತ್ವಕ್ಕೆ ಬಂದಿರುತ್ತದೆ.
ಬಿಲ್ಲವ ಸಮಾಜದ ಪ್ರತಿಯೊಂದು ಮನೆಯ ಮಹಿಳೆಯರು ಈ ಮಾತೃಸಂಘದಲ್ಲಿ ಸದಸ್ಯತನವನ್ನು ಪಡೆಯಬೇಕು, ಬಡವ- ಬಲ್ಲಿದ ಎಂಬ ಬೇದವಿಲ್ಲದೆ ಈ ಸಂಘದಲ್ಲಿ ಎಲ್ಲರಿಗೂ ಸಮಾನವಾಗಿ ಸದಸ್ಯತನ ಸಿಗುವಂತಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಈ ಸಂಘದಲ್ಲಿ ನಾವೂ ಕನಿಷ್ಠ 100 ರೂಪಾಯಿಗಳಿಂದ ಸಾಮಾನ್ಯ ಸದಸ್ಯತನವನ್ನು ನಿಗದಿಪಡಿಸಿ, ರೂ.1000 ಸಾವಿರ, ರೂ.5000. ರೂ.10,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡುವವರನ್ನು ಮಹಾಪೋಷಕ ಸದಸ್ಯರನ್ನಾಗಿ ಮಾಡಿ ದಾನಿಗಳ ನೆರವಿನ ಹಸ್ತದಿಂದ ಸಮಾಜದ ಮಹಿಳೆಯರ ಏಳಿಗೆಗಾಗಿ ವಿನಿಯೋಗಿಸುವ ಯೋಜನೆಯನ್ನು ರೂಪಿಸಿರುತ್ತೇವೆ.
ಈ ಮಹಿಳಾ ಸಂಘಕ್ಕೆ ದೇಶ,ವಿದೇಶಗಳಲ್ಲಿ ನೆಲೆಸಿರುವ ಬಿಲ್ಲವ ಸಮಾಜದ ಮಹಿಳೆಯರು ಮುಕ್ತ ಮನಸ್ಸಿನಿಂದ ಸಹಕರಿಸಿ, ಈ ಮಹಿಳಾ ಸಂಘದಲ್ಲಿ ಸದಸ್ಯತ್ವವನ್ನು ಪಡೆದು ಸಮಾಜದ ಉತ್ತರೋತ್ತರ ಅಭಿವೃದ್ಧಿಗೆ ಈ ಮಹಿಳಾ ಸಂಘದೊಂದಿಗೆ ಕೈಜೋಡಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಈ ಮಹಿಳಾ ಸಂಘದ ಜೊತೆಗಿರಲಿ ಎಂಬ ಆಶಯೊಂದಿಗೆ.
ವಿಶ್ವ ಬಿಲ್ಲವ ಮಹಿಳಾ ಸಂಘ(ರಿ).
ಆಡಳಿತ ಮಂಡಳಿ ಸದಸ್ಯರುಗಳು
- ಅಧ್ಯಕ್ಷರು:- ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್.
(ಮ್ಯಾನೇಜಿಂಗ್ ಡೈರೆಕ್ಟರ್ ಹೋಟೆಲ್ ದೀಪಾ ಕಂಫರ್ಟ್ಸ್ ಮಂಗಳೂರು.)
(ಉಪಾಧ್ಯಕ್ಷರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು). - ಉಪಾಧ್ಯಕ್ಷರು:- ವಿಜಯ ಅರುಣ್ ( ಮಾಜಿ ಮೇಯರ್).
- ಪ್ರಧಾನ ಕಾರ್ಯದರ್ಶಿ:- ಸುಜಾತ ಸುವರ್ಣ ಕೊಡ್ಮಾಣ್.(ಸಾಮಾಜಿಕ ಚಿಂತಕಿ)
- ಜತೆ ಕಾರ್ಯದರ್ಶಿ:- ಸುಮನ್ ಸುನಿಲ್ (ಉದ್ಯಮಿ)
- ಕೋಶಾಧಿಕಾರಿ:- ಶ್ರೀಲತಾ ಗೋಪಾಲಕೃಷ್ಣ
- ಕೋಶಾಧಿಕಾರಿ:- ಮಮತಾ ಪ್ರವೀಣ್ ದಂಡಕೇರಿ
- ಸಲಹೆಗಾರರು:- ಡಾ.ಅನಸೂಯ ಬಿ.ಸಾಲ್ಯಾನ್ (ನಿವೃತ್ತ ವೈದ್ಯರು)
- ಸಲಹೆಗಾರರು:- ಕೆ.ಎ.ರೋಹಿಣಿ( ನಿವೃತ್ತ ಶಿಕ್ಷಕಿ)
- ಮಾಲತಿ ಜನಾರ್ದನ ಪೂಜಾರಿ
- ಡಾ.ಸೌಮ್ಯ ಸದಾನಂದ್ ( ವೈದ್ಯರು)
- ರಜನಿ ದುಗ್ಗಣ್ಣ( ಮಾಜಿ ಮೇಯರ್)
- ಕಲ್ಪನಾ ಸಾಯಿರಾಂ
- ಸಮಿತಾ ಹರೀಶ್ ( ನಿವೃತ್ತ ಸರಕಾರಿ ಉದ್ಯೋಗಿ)
- ಚಂಚಲಾ ತೇಜೋಮಯ (ಅಧ್ಯಕ್ಷರು ದ.ಕ.ಜಿಲ್ಲಾ ಮಹಿಳಾ ಒಕ್ಕೂಟ)
- ಜಯಲಕ್ಷ್ಮೀ ಬಿ.ಆರ್. ರಾಜ್ಯಧ್ಯಕ್ಷರು ಅಂಗನವಾಡಿ ಕೇಂದ್ರ
ಸ್ಥಾಪನೆ: 16-02-2020
ನೋಂದಣಿ ಸಂಖೈ: DRDK /SOR / 138 /2020-21
ಅಧ್ಯಕ್ಷರು,
ಪದಾಧಿಕಾರಿಗಳು ಹಾಗೂ ಸದಸ್ಯರು
ವಿಶ್ವಬಿಲ್ಲವ ಮಹಿಳಾ ಸಂಘ (ರಿ.)
ಶ್ರೀ ಗೋಕರ್ಣನಾಥ ಕ್ಷೇತ್ರ
ಕುದ್ರೋಳಿ, ಮಂಗಳೂರು-03.
