ವಿಶ್ವ ಬಿಲ್ಲವ ಮಹಿಳಾ ಸಂಘದಿಂದ ಅಂತರಾಷ್ಟೀಯ ಮಹಿಳಾ ದಿನದ ಆಚರಣೆ ಹಾಗೂ ಬಡ ಕುಟುಂಬಕ್ಕೆ ಸಹಾಯಧನ ವಿತರಿಸಲಾಯಿತು.
ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಫೆಬ್ರವರಿಯಲ್ಲಿ ನೂತನವಾಗಿ ಉದ್ಫಾಟನೆಗೊಂಡ ವಿಶ್ವ ಬಿಲ್ಲವ ಮಹಿಳಾ ಸಂಘದಲ್ಲಿ ಅಂತರಾಷ್ಟೀಯ ಮಹಿಳಾ ದಿನವನ್ನು ಮಾರ್ಚ್ 7 ರಂದು ಕುದ್ರೋಳಿ ಕ್ಷೇತ್ರದ ವುಶ್ವನಾಥ ಕಲ್ಯಾಣ ಮಂಟಪದ ಗಾಜಿನ ಮನೆಯಲ್ಲಿ ಆಚರಿಸಲಾಯಿತು.
ಮಸ್ಕತ್ ಓಮಾನ್ ಬಿಲ್ಲವಾಸ್ ಸಂಘದ ಪ್ರಥಮ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಸುಚೇತನಾ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಹಿಳಾ ದಿನದ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು.
ದೂರದ ಮಸ್ಕತ್ ದೇಶದಲ್ಲಿ ಉದ್ಯೋಗದಲ್ಲಿರುವ ಇವರನ್ನು ಮಹಿಳಾ ದಿನದ ಅಂಗವಾಗಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಸುಚೇತನಾ ಅಂಚನ್ ರವರು ವಿಶ್ವ ಬಿಲ್ಲವ ಮಹಿಳಾ ಸಂಘದ ಧ್ಯೇಯ ಉದ್ದೇಶಗಳನ್ನು ಅರಿತು ವಿಶ್ವಾದಾದ್ಯಂತ ಇರುವ ಬಿಲ್ಲವ ಮಹಿಳೆಯರನ್ನು ಒಟ್ಟು ಸೇರಿಸುವ ಸಾಹಸಕ್ಕೆ ಇಳಿದು ವಿಶ್ವ ಬಿಲ್ಲವ ಮಹಿಳಾ ಸಂಘ ಎಂದು ಹೆಸರಿಟ್ಟದಕ್ಕೆ ಸಂತಸ ವ್ಯಕ್ತಪಡಿಸಿ ತಾನು ಶಕ್ತಿ ಮೀರಿ ಈ ಮಹಿಳಾ ಸಂಘಕ್ಕೆ ಬೆಂಬಲವನ್ನು ನೀಡುವುದಾಗಿ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ವಿಶ್ವದಾದ್ಯಂತ ನೆಲೆಸಿರುವ ಬಿಲ್ಲವ ಮಹಿಳೆಯರು ಈ ಸಂಘದಲ್ಲಿ ಕೈ ಜೋಡಿಸಿ ಸಂಘಟನೆಯನ್ನು ಬೆಳೆಸುವತ್ತ ಗಮನಹರಿಸಲಿ ಎಂದರು.
ಇನ್ನೋರ್ವ ಅತಿಥಿಯಾಗಿದ್ದ ಮ.ನ.ಪಾ.ದ ನೂತನ ಉಪಮೇಯರ್ ಹುದ್ದೆಯನ್ನು ಅಲಂಕರಿಸಿರುವ ವೇದಾವತಿ ( ಜಾನಕಿ) ಇವರನ್ನು ಕೂಡ ಮಹಿಳಾ ದಿನದ ಅಂಗವಾಗಿ ಅಭಿನಂದಿಸಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿದ ಉಪಮೇಯರ್ ವೇದಾವತಿಯವರು ಜನಾಭಿವೃದ್ದಿಯ ಕೆಲಸಗಳೊಂದಿಗೆ ಜಾತಿ,ಮತ,ಭೇದವಿಲ್ಲದೆ ಜನರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಹಾಗೆಯೇ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನೂತನವಾಗಿ ಸ್ಥಾಪಿತವಾದ ಈ ಸಂಘಕ್ಕೆ ತಾನೂ ಸಹಕರಿಸುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ.ಅನಸೂಯ ಬಿ.ಸಾಲ್ಯಾನ್ ಇವರು ಮಹಿಳಾ ದಿನದ ಮಹತ್ವದ ಬಗ್ಗೆ ತಿಳಿಸಿದರು.
ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ವಿಜಯ ಅರುಣ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಲತಿ ಜೆ.ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ದಿನದ ಅಂಗವಾಗಿ ಸೇರಿದ್ದ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಭಾರತಿ ಅಮೀನ್ ಇವರ ಮಹಿಳಾ ತಂಡದಿಂದ ಸಂಗ್ರಹಿಸಲಾದ ರೂ 20,000/- ಸಹಾಯಧನವನ್ನು ಕಾರ್ಕಳ ತಾಲೂಕಿನ ಬಾಣಂತಿ ಯೋಗಿತ ಎಂಬವರಿಗೆ ಅವರ ಪತಿ ವಿಠಲ್ ರವರು ಸಾಲ ಮಾಡಿ ಲಕ್ಷಾಂತರ ಖರ್ಚುಮಾಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲಿ ಮೃತಪಟ್ಟ ಕಾರಣ ವಿಠಲ್ ರವರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿ ಹಸುಗೂಸು ಮಗುವಿನ ಲಾಲನೆ ಪಾಲನೆ ಮಾಡಲು ತೀವ್ರ ಕಷ್ಟಕರ ಪರಿಸ್ಥಿತಿ ಯಲ್ಲಿದ್ದುದನ್ನು ಮನಗಂಡು ಮಗುವಿನ ಪೋಷಣೆಗಾಗಿ ಭಾರತಿ ಅಮೀನ್ ರವರ ನೇತೃತ್ವದಲ್ಲಿ ಸಂಗ್ರಹವಾದ ಮೊತ್ತ ರೂ.20,000ವನ್ನು ಈ ಬಡ ಕುಟುಂಬಕ್ಕೆ ಈ ಸಂದರ್ಭದಲ್ಲಿ ನೀಡಲಾಗಿತ್ತು.
ಪ್ರ.ಕಾರ್ಯದರ್ಶಿ ಸುಜಾತಸುವರ್ಣ,ಕೋಶಾಧಿಕಾರಿ ಶ್ರೀಲತಾಗೋಪಾಲಕೃಷ್ಣರವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು .
ಕೆ.ಎ.ರೋಹಿಣಿಯವರು ಕಾರ್ಯಕ್ರಮ ನಿರೂಪಿಸಿದರು.



