ವಿಶ್ವ ಬಿಲ್ಲವ ಮಹಿಳಾ( ರಿ). ಕುದ್ರೋಳಿ ಮಂಗಳೂರು ಇವರು ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗಾಗಿ ಚಿಣ್ಣರ ಅಂಗಳ ಎಂಬ ವಿಶೇಷ ಕಾರ್ಯಕ್ರಮದಲ್ಲಿ
ವಿವಿಧ ಆಟೋಟ ಸ್ಪರ್ಧೆ, ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಬ್ರಹ್ಮ ಸಮಾಜ ಕಟ್ಟಡದ ಮೇಲಿನ ಮಹಡಿಯ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಕರಾಗಿ ಕು.ದೀತ್ಯಾ ಸ್ವೀಕೃತ್ ಮತ್ತು ಕು.ತೃಷಿಕಾ ಪ್ರಸಾದ್ ಹಾಗೂ ಸಭಾಧ್ಯಕ್ಷರಾಗಿ ಮಾ. ರಜತ್ ದಂಡಕೇರಿ ನೆಹರೂ ವೇಷಭೂಷಣ ಧರಿಸಿ ವೇದಿಕೆಯನ್ನು ಅಲಂಕರಿಸಿದ್ದರು. ಮುಖ್ಯ ಅತಿಥಿಯಾಗಿ ಮುಲ್ಕಿ ಮಾನಂಪಾಡಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ವಸಂತಿ ಗಣೇಶ್ ಇವರು ಕಾರ್ಯಕ್ರಮದ ವಿಶೇಷತೆ ಬಗ್ಗೆ ಕೊಂಡಾಡಿದರು. ಮಕ್ಕಳಿಗಾಗಿ ವಿಶ್ವ ಬಿಲ್ಲವ ಮಹಿಳಾ ಸಂಘ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪಾಲು ಪಡೆಯುವುದು ತನ್ನ ಭಾಗ್ಯ ಎಂದರು. ತಾನು ಕಲಿತ ಶಾಲೆಯಲ್ಲೇ 35 ವರುಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಮಾ.ರಜತ್ ದಂಡಕೇರಿ ಇವರು ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಕ್ಕಳಿಗಾಗಿಯೇ ವೇದಿಕೆ ಸಜ್ಜುಗೊಳಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಮಾತನಾಡಿ ಮಕ್ಕಳಿಗಾಗಿ ವಿಶ್ವ ಬಿಲ್ಲವ ಮಹಿಳಾ ಸಂಘವು ಮೊದಲ ಬಾರಿ ಇಂತಹ ಕಾರ್ಯಕ್ರಮ ನಡೆಸಿದ್ದು.ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿರುವುದು ಖುಷಿಯಾಗಿದೆ. ಮುಂದೆಯೂ ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸೋಣ ಎಂದರು.
3-12 ವರ್ಷದೊಳಗಿನ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಸಂಘದ ಸದಸ್ಯರಾದ ವೀಣಾ ಕುದ್ರೋಳಿ , ಸುಮಲತಾ ರಾಜೇಶ್, ರೇಣುಕಾ ಪ್ರಸಾದ್, ಆಶಾ, ವನಿತಾ, ರಾಜೇಶ್ವರಿ, ಜಯಶ್ರೀ, ದಯಾಮಣಿ ವಿ.ಕೊಟ್ಯಾನ್, ಜಯಶೀಲ, ಉಮಾ ಶ್ರೀಕಾಂತ್, ರವಿಕಲಾ ವೈ. ಅಮೀನ್ ವೀಕ್ಷಿತಾ ಸಿ.ಸನಿಲ್ , ಸತ್ಯ ಆರ್.ಬೋಳೂರು, ಜಯಶೀಲ, ವೀಣಾ ಸುಧೀರ್, ಸೌಮ್ಯವಸಂತ್, ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ವಿಜೇತರಿಗೆ ಮಾತ್ರವಲ್ಲದೇ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಣೆಯನ್ನು ವಿಜಯ ಅರುಣ್, ಅಮಿತಾ ಮಹಾಬಲ, ಹಿತಾ ಪ್ರವೀಣ್ ನಡೆಸಿಕೊಟ್ಟು ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಜತೆ ಕಾರ್ಯದರ್ಶಿ ಸಮಿತಾ ಹರಿಶ್ಚಂದ್ರ ಇವರು ವಿಜೇತರನ್ನು ಆಯ್ಕೆ ನಡೆಸಿದರು. ಕುಮಾರಿ ಧೃತಿ ಕೊಟ್ಯಾನ್ ಮತ್ತು ವಸಂತಿ ಟೀಚರ್ ಇವರ ಸಾಧನೆಯನ್ನು ಗುರುತಿಸಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಮತಾ ಪ್ರವೀಣ್ ಸನ್ಮಾನಿತರ ಪಟ್ಟಿ ವಾಚಿಸಿದರು. ಕಾರ್ಯಕ್ರಮದಲ್ಲಿ ಕು.ದಕ್ಷಾ ಡಿ.ಕೊಡ್ಮಾಣ್ ಸ್ವಾಗತಿಸಿ , ಸಂಘದ ಪ್ರಧಾನಕಾರ್ಯದರ್ಶಿ ಸುಜಾತಸುವರ್ಣ ವಂದಿಸಿದರು. ಕು. ದೃತಿ ಎಸ್. ಕೊಟ್ಯಾನ್ ಚೇಳೈರು ಇವರು ಕಾರ್ಯಕ್ರಮ ನಿರೂಪಿಸಿದರು. ಸಲಹೆಗಾರರಾದ ಕೆ.ಎ.ರೋಹಿಣಿ , ಶುಭಾಷಿಣಿ ಗುಣಪಾಲ್ ಮತ್ತಿತರರು ಉಪಸ್ಥಿತರಿದ್ದರು.

