ವಿಶ್ವ ಬಿಲ್ಲವ ಮಹಿಳಾ ಸಂಘ(ರಿ). ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು.
ಸಂಘದ ಐದನೇ ವಾರ್ಷಿಕ ಐಸಿರಿ- 2025 ಕಾರ್ಯಕ್ರಮ ದಿನಾಂಕ 10-8-2025ನೇ ಆದಿತ್ಯವಾರ ಹೋಟೇಲ್ ದೀಪಾ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಿತು. 

ಈ ಕಾರ್ಯಕ್ರಮವನ್ನು ದೋಹಾ ಕತಾರ್ ನ ಬಿಲ್ಲವ ಸಂಘದ ಪ್ರಥಮ ಮಹಿಳಾಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಪದಾಧಿಕಾರಿಗಳಿಂದ ನಾರಾಯಣ ಗುರುಭಾವಚಿತ್ರಕ್ಕೆ ದೀಪಾ ಬೆಳಗಿ ಗುರುಸ್ತೋತ್ರದೊಂದಿಗೆ ಆರಂಭಗೊಂಡು ಕುಮಾರಿಯರಾದ ಶ್ರೀಕಾ ಪೂಜಾರಿ ಮತ್ತು ದೀಪಾಲಿ ಇವರಿಂದ ಸ್ವಾಗತನೃತ್ಯ ನಡೆದು, ಶ್ರೀಲತಾ ಗೋಪಾಲಕೃಷ್ಣ ,ಮಮತಾ ಪ್ರವೀಣ್, ವಿಜಯ ಅರುಣ್ ಇವರುಗಳು ದೇವರಸ್ತುತಿ ಹಾಡಿದರು. ನಂತರ ಸಂಘದ ಅಧ್ಯಕ್ಷರು ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಉಪಾಧ್ಯಕ್ಷರಾದ ವಿಜಯ ಅರುಣ್ ಸ್ವಾಗತಿಸಿದರು. ಸಂಘದ ಪ್ರದಾನ ಕಾರ್ಯದರ್ಶಿ ಸುಜಾತ ಸುವರ್ಣ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ರಿತಿಕಾ ರಮೇಶ್ ms General Surgery ವಿಭಾಗದಲ್ಲಿ ರಾಜ್ಯಕ್ಕೆ 2 ನೇ ರ್ಯಾಂಕ್ ವಿಜೇತರು,
CA ರಶ್ಮೀ ಕೆ.ಸುವರ್ಣ ಪ್ರಥಮ ಯತ್ನದಲ್ಲಿ CA ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು. ಡಾ.ಅಕ್ಷಿತಾ ಮಾಹೆ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪಡೆದವರು ಇವರುಗಳನ್ನು ಕ್ರಮವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ ಅಪರ್ಣ ಶರತ್ ಇವರು ಸಂಘದ ಕಾರ್ಯವೈಖರಿಯ ಬಗ್ಗೆ ಕೊಂಡಾಡಿದರು. ಉರ್ಮಿಳಾ ರಮೇಶ್ ರವರ ನೇತೃತ್ವದಲ್ಲಿ ಸಂಘವು ಹಲವು ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಯಾವುದೇ ಆಡಂಬರವಿಲ್ಲದೇ ಮುನ್ನಡೆಯುತ್ತಿದೆ. ವಿಶ್ವಬಿಲ್ಲವ ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ಪಾಲುಪಡೆದದ್ದು ತುಂಬಾ ಸಂತೋಷವಾಗಿದೆ ಎಂದರು. ಹಾಗೆಯೇ ಇನ್ನೋರ್ವ ಅತಿಥಿ ಶ್ರೀಮತಿ ಅಪೂರ್ವ ಕಾರ್ತಿಕ್ ಸಂಘದ 4 ವರ್ಷದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘವು ಮುಂದೆಯೂ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಶುಭಹಾರೈಸಿದರು.
ಸಂಘದ ವತಿಯಿಂದ ಸನ್ಮಾನಿತಗೊಂಡ ಸಾಧಕರು ತಾವೂ ಕಷ್ಟ ಪಟ್ಟು ಓದುವ ಮೂಲಕ ಇಂದು ಈ ಹಂತಕ್ಕೆ ತಲುಪಿರುತ್ತೇವೆ. ಎಂದು ತಮ್ಮ ತಮ್ಮ ಜೀವಾನಾನುಭಗಳನ್ನು ಹಂಚಿಕೊಂಡರು.

ನಂತರ ನಡೆದ ಧನಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಬೇಬಿ ಯದ್ವಿ ಎಂಬ ಹೆಣ್ಣು ಮಗು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದು ಸಂಘದ ವತಿಯಿಂದ ಅವರಿಗೆ 25,000 ರೂಪಾಯಿಗಳನ್ನು ಚೆಕ್ ಮೂಲಕ ನೀಡಲಾಯಿತು. ನಂತರ ಆರ್ಥಿಕವಾಗಿ ತೊಂದರೆಯಲ್ಲಿರುವ ಸಂಘದ 9 ಮಂದಿ ಸದಸ್ಯೆಯರಿಗೆ ಧನಸಹಾಯ ವಿತರಿಸಲಾಯಿತು.
ನಂತರ ತ್ರೋಭಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯೆ ಸುಮಲತಾ ರಾಜೇಶ್ ಇವರುಗಳ ಪುತ್ರಿ ವೈಷ್ಣವಿ ಹಾಗೂ S.S.L.C ಯಲ್ಲಿ 620 ಅಂಕಗಳನ್ನು ಪಡೆದ ಕು.ವಂಶಿಕಾ ಕರ್ಕೇರಾ ಇವರನ್ನು ಸಂಘದ ವತಿಯಿಂದ ಶಾಲು , ರೂಪಾಯಿ5,000 ಗೌರವಧನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಂಘದ ಸದಸ್ಯೆಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ದೃತಿ ಕುಂಟಾಲ್ಪಾಡಿ, ಹರ್ಷಿತ್ ಎಸ್ ಅಮೀನ್, ಸಿಂಚನ ಎಚ್ ಕುತ್ತಾರು, ಕು.ತನ್ವಿ, ಎಂ. ಡಿ. ರಿತಿಕಾ ಕಾವೂರು, ತೃಷಾ ಸಿ.ಜೆ, ಮಾನ್ವಿತಾ ಅಮೀನ್, ವೃಷ್ಣವಿ ಎಮ್, ಕೊಟ್ಯಾನ್, ಜೋಶಿಕಾ , ರಿತೇಶ್ ಅಂಚನ್, ಮನ್ವಿತ ಕೆ. ಕುಡುಪು, ಸಿಂಚನ ಕಲ್ಪನೆ, ಮನೀಶ್ ಜಾರದಬೆಟ್ಟು, ಸಾನ್ವಿ ಕೊಟ್ಯಾನ್ , ಸೌರಭ್ ಎಸ್. ಕರ್ಕೇರಾ ಇವರುಗಳಿಗೆ ತಲಾ 5,000/- ದಂತೆ ವಿದ್ಯಾರ್ಥಿ ವೇತನ ನೀಡಲಾಯಿತು.
ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ ರವರು ತನ್ನ ಅಧ್ಯಕ್ಷಿಯ ಭಾಷಣದಲ್ಲಿ ಸಂಘದ ಕಾರ್ಯಕ್ರಮದ ಉದ್ಛಾಟಿಸಿ ಕಾರ್ಯಕ್ರಮದ ಮೆಚ್ಚುಗೆ ಸೂಚಿಸಿದ ಅಪರ್ಣ ಶರತ್ ಇವರಿಗೆ ಕೃತಜ್ಞತೆ ಸಲ್ಲಿಸಿ, ಸಂಘದ ಬೆಳವಣಿಗೆಗೆ ಸಹಾಯಧನ ನೀಡಿ ಪ್ರತಿವರ್ಷ ಸಹಕರಿಸುತ್ತಾ ಬಂದಿರುವ ಮಹಾಪೋಷಕ ಸದಸ್ಯೆಯರುಗಳ ಬೆಂಬಲ ಹಾಗೂ ಸಂಘ ಶಕ್ತಿಗೆ ಸಾಕ್ಷಿಗಳಾದ ಪ್ರತಿ ಸದಸ್ಯರು ಸಂಘದ ಒಗ್ಗಟ್ಟಿಗೆ ದುಡಿಯುತ್ತಿರುವುದು ಶ್ಲಾಘನೀಯ ವೆಂದರು, ಸಂಘದ ಈ ಹಿಂದಿನ ನಾಲ್ಕು ವರ್ಷದಲ್ಲಿ ವಿಶೇಷವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಮುಂದೆಯೂ ಸದಸ್ಯರ ಬೆಂಬಲದಿಂದ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸರ್ವರ ಸಹಕಾರ ಅತ್ಯಗತ್ಯವೆಂದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಜತೆ ಕಾರ್ಯದರ್ಶಿ ಸೌಮ್ಯವಸಂತ್ ಧನ್ಯವಾದ ಸಮರ್ಪಿಸಿದರು.

ಸಭಾ ಕಾರ್ಯಕ್ರಮ ಮುಗಿದ ನಂತರ ಸಂಘದ ಸದಸ್ಯೆಯರಿಂದ ನೃತ್ಯ, ಹಾಡು, ಕಿರು ರೂಪಕ ನಡೆಯಿತು. ಭೋಜನ ವಿರಾಮದ ಬಳಿಕ ಸಂಘದ ವಾರ್ಷಿಕ ಮಹಾಸಭೆ ಜರುಗಿತು.