ವಿಶ್ವಬಿಲ್ಲವ ಮಹಿಳಾ ಸಂಘ ಪ್ರಥಮ ವರ್ಷವನ್ನು ಪೂರೈಸಿದ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಚಿಗುರು-2021 ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ಸ್ ನ ಸಭಾಂಗಣದಲ್ಲಿ ಫೆಬ್ರವರಿ-14 ರಂದು ನಡೆಯಿತು.
ಶ್ರೀಮಾನ್ ಜನಾರ್ದನ ಪೂಜಾರಿಯವರ ಶುಭಾಶೀರ್ವಾದದೊಂದಿಗೆ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ
ಈ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಲಯದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರು, ಶ್ರೀ ಸೌಹಾರ್ದ ಸಹಕಾರಿ ಅಧ್ಯಕ್ಷೆ ಶ್ರೀಮತಿ ಸುಮಲತಾ ಎನ್.ಸುವರ್ಣ ಮುಖ್ಯ ಅತಿಥಿಗಳಾಗಿದ್ದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ದೀಪಾ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಸುಮಲತಾ ಎನ್. ಸುವರ್ಣ ರವರು ಮಹಿಳೆಯರು ಹೆಚ್ಚಾಗಿ ಕುಟುಂಬದ ಜವಾಬ್ದಾರಿ ಯನ್ನು ನಿಭಾಯಿಸಿ ಸಂಘಸಂಸ್ಥೆಗಳ ಒಡನಾಟದಲ್ಲಿರಬೇಕು ವಿಶ್ವ ಬಿಲ್ಲವ ಮಹಿಳಾ ಸಂಘಕ್ಕೆ ಯಾವಾಗಲೂ ನನ್ನ ಪೂರ್ಣ ಬೆಂಬಲವಿದೆ. ನಾನು ಕೂಡ ಈ ಸಂಘದಲ್ಲಿ ಉತ್ತಮ ಕೆಲಸ ಕಾರ್ಯಗಳಿಗೆ ನಮ್ಮದೇ ಎಂಬ ಭಾವನೆಯಿಂದ ಕೈಜೋಡಿಸುತ್ತೇನೆ ಎಂದರು.
ಗಾಲಿಕುರ್ಚಿ ವಿತರಿಸಿ ಮಾತನಾಡಿದ ಶಾಸಕರಾದ ವೇದವ್ಯಾಸ ಕಾಮತ್ ರವರು ವಿಶ್ವ ಬಿಲ್ಲವ ಮಹಿಳಾ ಸಂಘವು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಜಾತಿ, ಮತ ಭೇದವಿಲ್ಲದೆ ಸರ್ವಧರ್ಮದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಗಾಲಿ ಕುರ್ಚಿ ವಿತರಿಸಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಸಮಾಜಮುಖಿಚಿಂತನೆಯೊಂದಿಗೆ ಇನ್ನಷ್ಟು ಎತ್ತರಕ್ಕೆ ಈ ಸಂಘವು ಬೆಳೆಯಲಿ- ರವಿಶಂಕರ್ ಮಿಜಾರ್
ಸಂಘಟನಾತ್ಮಕವಾಗಿ ಬಲಯುತರಾಗಬೇಕು- ಡಾ.ಮಧುಮಾಲಾ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಿಕೆ ಡಾ.ಮಧುಮಾಲಾರವರು ಮಹಿಳೆ- ಕುಟುಂಬ- ಸಂಘಟನೆ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿ ಕೌಟುಂಬಿಕ ವಾಗಿ ಮಹಿಳೆ ತನ್ನ ಜವಾಬ್ದಾರಿ ಯೊಂದಿಗೆ ಸಂಘಟನಾತ್ಮಕವಾಗಿ ಒಗ್ಗಟ್ಟಾಗಿ ಇದ್ದು ನಾರಿಶಕ್ತಿ ಏನೆಂಬುದನ್ನು ಸಮಾಜಕ್ಕೆ ತಿಳಿಸಿಕೊಡುವಲ್ಲಿ ಈ ಸಂಘವು ಸಂಘಟನಾತ್ಮಕವಾಗಿ ಮೊದಲು ಬಲಯುತರಾಗಬೇಕೆಂದರು.
ಕಾರ್ಯಕ್ರಮದ ಕೊನೆಗೆ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಮಾತನಾಡಿ ಈ ದಿನ ನಾವೂ ನಮ್ಮ ಸಂಘದ ಮಹಿಳಾ ದಾನಿಗಳ ನೆರವಿನಿಂದ ಜಾತಿ,ಮತ,ಭೇದವಿಲ್ಲದೆ ಮಂಜೇಶ್ವರ, ಸಜಿಪ, ಫರಂಗಿಪೇಟೆ, ಬಂಟ್ವಾಳ, ವಾಮದಪದವು, ಜೆಪ್ಪಿನ ಮೊಗ್ರು, ವಾಮಂಜೂರು, ಕೋಡಿಕಲ್ ಕಾವೂರು ಪರಿಸತದ ಸುಮಾರು 19 ಮಂದಿಗೆ ಅರ್ಹ ಫಲಾನುಭವಿಗಳಿಗೆ ಗಾಲಿ ಕುರ್ಚಿ ವಿತರಿಸುವಂತಾಯಿತು. ಮುಂದೆಯೂ ಸಂಘದ ಸದಸ್ಯೆಯರ ಸಹಕಾರದಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಧ್ಯೇಯೋದ್ಧೇಶಗಳನ್ನು ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಹಾಗೂ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವಿಜಯ ಅರುಣ್ ಪ್ರಾಸ್ತಾವಿಕ ನುಡಿಗಳಾನ್ನಾಡಿ ಡಾ.ಅನಸೂಯ ಬಿ.ಸಾಲ್ಯಾನ್ ಸ್ವಾಗತಿಸಿ, ಸುಜಾತ ಸುವರ್ಣ ಕೊಡ್ಮಾಣ್ ಇವರು ವಂದನಾರ್ಪಣೆಗೈದರು. ಸುಮಲತಾ ಹಾಗೂ ಕೆ.ಎ.ರೋಹಿಣಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸಂಘದ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿಶ್ವಬಿಲ್ಲವ ಮಹಿಳಾ ಸಂಘದ ಸಮಿತಿ ಸದಸ್ಯರಾದ ಶ್ರೀಮತಿ ಮಾಲತಿ ಜನಾರ್ದನಪೂಜಾರಿ, ಕಲ್ಪನಾ ಸಾಯಿರಾಂ, ರಜನಿದುಗ್ಗಣ್ಣ, ಡಾ.ಸೌಮ್ಯ ಪಿ.ಡಿ, ಮಮತಾ ಪ್ರವೀಣ್ ದಂಡಕೇರಿ, ಸಮಿತಾ ಹರೀಶ್, ಜಯಲಕ್ಷ್ಮೀ ಬಿ.ಆರ್, ಚಂಚಲಾ ತೇಜೋಮಯ ಉಪಸ್ಥಿತರಿದ್ದರು.


ವಿಶ್ವ ಬಿಲ್ಲವ ಮಹಿಳಾ ಸಂಘದ (ರಿ).
ಲೋಗೋ ರಚನೆಯನ್ನು ವಿಶಿಷ್ಟವಾಗಿ ವಿನ್ಯಾಸ ಮಾಡಿಕೊಟ್ಟ
ಹರ್ಪಲ್ ಡಿಜಿಟಲ್ ಸ್ಥಾಪಕ – ( ಸೋಲೋಪ್ರೆನಿಯರ್ )
ಉತ್ಪಲ್ ಉಮೇಶ್ ರವರಿಗೆ ಸಂಘದ ವತಿಯಿಂದ ಅಧ್ಯಕ್ಷರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ಅಭಿನಂದನೆಯನ್ನು ಸಲ್ಲಿಸಿದ ಸಂದರ್ಭ.

