ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ- 2021 ರಂದು
ವಿಶ್ವಬಿಲ್ಲವ ಮಹಿಳಾ ಸಂಘದ ವತಿಯಿಂದ ನಡೆದ ಮಹಿಳಾ ದಿನದ ಆಚರಣೆಯಲ್ಲಿ ಸಂಘದ ಕಾರ್ಯದರ್ಶಿ ಸುಜಾತ ಸುವರ್ಣ ಇವರು ಪತ್ರಿಕೋದ್ಯಮ ಹಾಗೂ ಸಮಾಜಮುಖಿ ಸೇವೆಗಾಗಿ ಬಿಲ್ಲವ ಮಹಾಮಂಡಲದ ವತಿಯಿಂದ ಗೌರವ ಪುರಸ್ಕಾರವನ್ನು ಪಡೆದ ಸಲುವಾಗಿ ಸಂಘದ ವತಿಯಿಂದ ಮಹಿಳಾ ದಿನಾಚರಣೆಯಂದು ಅಧ್ತಕ್ಷರಾದ ಉರ್ಮಿಳಾ ರಮೇಶ್ ಕುಮಾರ್ ಇವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಸಂಘದ ಸದಸ್ಯೆಯರಿಗಾಗಿ ಏರ್ಪಡಿಸಲಾಯಿತು. ಈ ಸ್ಪರ್ಧೆಯನ್ನು ಸದಸ್ಯೆ ಚಂಚಲಾ ತೇಜೋಮಯ ನಡೆಸಿಕೊಟ್ಟರು.

