ಮಹಾಶಿವರಾತ್ರಿ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಂತೋಷಿ‌ ಸಭಾಂಗಣದಲ್ಲಿ ವಿಶ್ವ ಬಿಲ್ಲವ ಮಹಿಳಾ ಸಂಘದ ಕ್ರಿಯಾಶೀಲ ಸದಸ್ಯೆಯರು ತ್ರಿಪುರಾರಿ ಶಿವ – ಶಂಭೋ – ಶಂಕರ ಎಂಬ ನೃತ್ಯ ರೂಪಕವನ್ನು‌ನಡೆಸಿಕೊಟ್ಟರು.

ಈ ನೃತ್ಯರೂಪಕದ ನಿರ್ಮಾಣ :- ಉರ್ಮಿಳಾ ರಮೇಶ್ ಕುಮಾರ್.
ರಚನೆ :- ಶ್ರೀಮತಿ ಜಯಲಕ್ಷ್ಮೀ ಬಿ.ಆರ್.
ನಿರ್ದೇಶನ :- ರೇಖಾ ರಂಜಿತ್,
ಹಿನ್ನೆಲೆ ಸಹಕಾರ:- ಸುಜಾತ ಸುವರ್ಣಕೊಡ್ಮಾಣ್ .
ಈ ನೃತ್ಯ ರೂಪಕವು ಯಶಸ್ವಿಯಾಗಿ ಮೂಡಿಬಂದಿದೆ. ವಿಶ್ವಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ಮೊದಲ ಬಾರಿಗೆ 21-2-2020 ರಲ್ಲಿ‌ ಶಿವ ಭಕ್ತ ಮಾರ್ಕಂಡೇಯ ಭಕ್ತಿ ಪ್ರಧಾನ ತಾಳಮದ್ದಲೆ‌ ಕುದ್ರೋಳಿ ಸಭಾಂಗಣದಲ್ಲಿ ಜರುಗಿತ್ತು.

2022 ರಲ್ಲಿ‌ ನವರಾತ್ರಿ ಅಂಗವಾಗಿ ಪರಮಾನಂದ ಸಾಲ್ಯಾನ್ ರಚಿಸಿದ ಮಾಯೋದ ದೇವೊಂಗುಲು‌ ಎಂಬ ಗೀತಾ ನಾಟಕವು ವಿಶ್ವ ಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ಜರುಗಿತ್ತು. ಈ ಮೂರು ಕಾರ್ಯಕ್ರಮದ ಸಂಪೂರ್ಣ ಖರ್ಚನ್ನು ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ ಸಂಘಕ್ಕೆ ಯಾವುದೇ ಹೊರೆಯಾಗದಂತೆ ನೋಡಿಕೊಂಡು ತಮ್ಮ ಸ್ವಂತ ಖರ್ಚನ್ನು ಭರಿಸಿ ಕಲಾತಂಡವನ್ನು ಪ್ರೋತ್ಸಾಹಿಸಿದ್ದರು. ಈ ಮೂರು ಕಾರ್ಯಕ್ರಮಗಳು ಯಶಸ್ವಿಯಾಗಿ ಮೂಡಿ ಬಂದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.