1

ಅನ್ನದಾನದ ಮಹತ್ವವನ್ನು ಹೆಚ್ಚಿಸಿದ ವಿಶ್ವ ಬಿಲ್ಲವ ಮಹಿಳಾ ಸಂಘದ ಪರಿಕಲ್ಪನೆಯಿಂದ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬಹುಮೊತ್ತದ ದೇಣಿಗೆ ಕೊಡುಗೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ವಿಶ್ವ ಬಿಲ್ಲವ ಮಹಿಳಾ ಸಂಘದ ವತಿಯಿಂದ ಶ್ರೀ ಕ್ಷೇತ್ರದ ಸನ್ನಿಧಾನದಲ್ಲಿ ನಡೆದ ಅನ್ನದಾನಕ್ಕೆ ಅಕ್ಕಿ ವಿತರಣಾ ಸೇವೆಯು ಪ್ರತಿ ವರ್ಷದಂತೆ ಈ ಬಾರಿಯೂ ಯಶಸ್ವಿಯಾಗಿ ನೇರೆವೇರಿದ್ದು , ಬಡವರಿಗೂ , ಜನಸಾಮಾನ್ಯರಿಗೂ ಅನ್ನದಾನದ ಸೇವಾ ಭಾಗ್ಯ ಒದಗಿಸಿದ ಕೀರ್ತಿ ವಿಶ್ವ ಬಿಲ್ಲವ ಮಹಿಳಾ ಸಂಘಕ್ಕೆ ಸಲ್ಲುತ್ತದೆ, ಶ್ರೀ ಕ್ಷೇತ್ರದ ಅನ್ನಪೂರ್ಣೇಶ್ವರಿಯ ಕೃಪೆಯಿಂದ ಅನ್ನದಾನಕ್ಕೆ ಅಕ್ಕಿ ಸೇವಾ ಕೌಂಟರ್ ನಲ್ಲಿ ಸಂಗ್ರಹಿಸಲಾದ
ರೂ. 10,01025 ( ಹತ್ತು ಲಕ್ಷದ ಒಂದು ಸಾವಿರದ ಇಪ್ಪತ್ತೈದು ರೂಪಾಯಿಗಳು) ನ್ನು ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಎಚ್.ಎಸ್.ಸಾಯಿರಾಂ ಅವರ ಕೈಯಲ್ಲಿ ನಗದು ಹಣವನ್ನು ಶ್ರೀ ಕ್ಷೇತ್ರಕ್ಕೆ ದೇಣಿಗೆಯಾಗಿ ನೀಡಲಾಯಿತು.

ವಿಶ್ವ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ರವರ ಮುಂದಾಳತ್ವದಲ್ಲಿ ಸಂಘದ ಪದಾಧಿಕಾರಿಗಳಾದ ವಿಜಯ ಅರುಣ್, ಸುಜಾತ ಸುವರ್ಣ, ಮಮತಾಪ್ರವೀಣ್, ಸೌಮ್ಯ ವಸಂತ್, ಮತ್ತು ಅಕ್ಕಿ ಸೇವಾ ವಿತರಣೆಯಲ್ಲಿ ಹಗಲು ರಾತ್ರಿ ಸೇವೆಗೈದ ಸಂಘದ ಸಕ್ರಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಘದ ಸರ್ವ ಸದಸ್ಯರ ಬೆಂಬಲ ಹಾಗೂ ಕಠಿಣ ಪರಿಶ್ರಮದಿಂದ ಎಲ್ಲರನ್ನು ಒಳಗೊಂಡು ಎಲ್ಲರು ಏಕಮನಸ್ಸಿನಿಂದ ಒಗ್ಗಟ್ಟಿನಿಂದ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಸೇವೆಯನ್ನು ನೀಡಿದರ ಫಲವಾಗಿ ಕಳೆದ ವರ್ಷದಂತೆ ಈ ಭಾರಿಯೂ ಶ್ರೀ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಚಂಡಿಕಾಹೋಮ ಹಾಗೂ ಅನ್ನದಾನಕ್ಕೆ ಅಕ್ಕಿ ಸೇವೆಯೂ ಶ್ರೀ ಕ್ಷೇತ್ರದ ಸರ್ವ ಶಕ್ತಿಗಳ ಅನುಗ್ರಹದಿಂದ ನಮ್ಮ ಸೇವೆ ಅತ್ಯಂತ ಯಶಸ್ವಿಯಗಿ ನೆರೆವೇರಿದೆ.