ತೃತೀಯ ವಾರ್ಷಿಕ ಕಾರ್ಯಕ್ರಮ ಸಂಭ್ರಮ ಹೊಟೇಲ್ ದೀಪಾ ಕಂಫರ್ಟ್ಸ್ ಸಭಾಂಗಣದಲ್ಲಿ ದಿನಾಂಕ 6-8-2023 ರಂದು ನಡೆಯಿತು.

       ವಿಶ್ವ ಬಿಲ್ಲವ ಮಹಿಳಾ ಸಂಘ(ರಿ) ತೃತೀಯ ವಾರ್ಷಿಕ ಕಾರ್ಯಕ್ರಮ ಸಂಭ್ರಮ.

ದಿನಾಂಕ 6-8-2023 ರಂದು, ಹೊಟೇಲ್ ದೀಪಾ ಕಂಫರ್ಟ್ಸ್ ಸಭಾಂಗಣದಲ್ಲಿ  ನಡೆಯಿತು.

ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಾಣಿಜೋದ್ಯಮಿ ಗಾಯತ್ರಿ ಸುರೇಶ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮಹಿಳಾ ಸಂಘದ ವೆಬ್ ಸೈಟ್ ‌ಲಿಂಕ್ vishwabillavamahila.org
ಮಹಿಳಾ ಸಂಘದ ವೆಬ್ ಸೈಟ್ ನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಶ್ರೀ.ಎಚ್.ಎಸ್.ಸಾಯಿರಾಂ ಬಿಡುಗಡೆಗೊಳಿಸಿ ಶುಭಹಾರೈಸಿದರು.ವೆಬ್ ಸೈಟ್ ‌ಲಿಂಕ್ vishwabillavamahila.org
ಶ್ರೀ ಸದಾನಂದ ಪೂಜಾರಿ
ಪ್ರತಿಷ್ಠಿತ ಬಿ.ಸಿ.ರಾಯ್ ಪ್ರಶಸ್ತಿ ಪಡೆದ ವೈದ್ಯರಾದ ಶ್ರೀ ಸದಾನಂದ ಪೂಜಾರಿ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಲಾಯಿತು.
ಶ್ರೀಮತಿ ಜಯಲತಾ ಎಸ್. ಅಮೀನ್
ಶ್ರೀಮತಿ ಜಯಲತಾ ಎಸ್. ಅಮೀನ್

ಮಂಗಳೂರು ಕೋಡಿಕಲ್ ನಿವಾಸಿಯಾದ ಶ್ರೀಮತಿ ಜಯಲತಾ ಎಸ್. ಅಮೀನ್ ಅವರು ತಂದೆ-ತಾಯಿಯಿಲ್ಲದೆ ತಬ್ಬಲಿಯಾದ ಹಾಗೂ ತಂದೆ-ತಾಯಿಯಿಂದ ದೂರವಿರುವ ನೂರಾರು ಅನಾಥ ಮಕ್ಕಳ ಬಾಳಿಗೆ ಬೆಳಕಾದವರು.
ಬೆಂಗಳೂರಿನ ಭಗವಾನ್‍ದಾಸ್ ಎಂಬುವರು ಹುಟ್ಟುಹಾಕಿದ ಮಂಗಳೂರಿನ ಪಂಪ್‍ವೆಲ್‍ನ ಸಿಟಿಜನ್ಸ್ ಅ¯ಯನ್ಸ್ ಫಾರ್ ರೂರಲ್ ಡೆವಲಪ್‍ಮೆಂಟ್ & ಟ್ರೈನಿಂಗ್ ಸೊಸೈಟಿಯ(ಕಾಡ್ರ್ಸ್) ಸಂವೇದನಾ ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಮಕ್ಕಳ ಏಳಿಗೆಗೆ ನಿರಂತರ ದುಡಿಯುತ್ತಾ ಬಂದವರು. ಪ್ರಾರಂಭದಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ‘ಸಂವೇದನಾ’ದಲ್ಲಿರುವ ಮಕ್ಕಳ ಆರೋಗ್ಯ ಮಾತ್ರವಲ್ಲದೆ ಅವರ ಭವಿಷ್ಯದ ದೃಷ್ಟಿಯಿಂದ ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಅವಿರತ ಶ್ರಮಿಸಿದವರು. ಸಂವೇದನಾ ಸಂಸ್ಥೆಯಲ್ಲೇ ಬೆಳೆದು ಒಂದು ಒಳ್ಳೆಯ ಜೀವನವನ್ನು ರೂಪಿಸಿದ ಹೆಣ್ಮಕ್ಕಳಿಗೆ ಒಳ್ಳೆಯ ಸಂಬಂಧವನ್ನು ನೋಡಿ ಮದುವೆಯನ್ನು ಮಾಡಿಸಿದ ಕೀರ್ತಿಗೂ ಜಯಲತಾ ಅವರು ಪಾತ್ರರಾಗಿದ್ದಾರೆ.
2003ರಲ್ಲಿ ಆರಂಭವಾದ ಅನಾರೋಗ್ಯ ಪೀಡಿತ ಮಕ್ಕಳ ಮನೆಯಲ್ಲಿ ಈ ವರೆಗೆ 164 ಅನಾರೋಗ್ಯ ಪೀಡಿತ ಮಕ್ಕಳು ನೋಂದಣಿಯಾಗಿದ್ದು, ಕೇವಲ ಒಂದು ಮಗುವಿನಿಂದ ಆರಂಭವಾಗಿರುವ ಈ ಸಂಸ್ಥೆಯಲ್ಲಿ ಪ್ರಸ್ತುತ 40 ಮಕ್ಕಳಿದ್ದಾರೆ. ಈ ಮಕ್ಕಳ ಪಾಲನೆ-ಪೋಷಣೆಯಲ್ಲಿ ಜಯಲತಾ ಎಸ್. ಅಮೀನ್ ಅವರ ಪಾತ್ರ ಹಿರಿದಾದುದು.
ಮಕ್ಕಳ ಆರೋಗ್ಯ ರಕ್ಷಣೆ, ಪಾಲನೆ-ಪೋಷಣೆಯೊಂದಿಗೆ ಅನಾಥ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಬಾಳಿಗೆ ಬೆಳಕಾದ ಶ್ರೀಮತಿ ಜಯಲತಾ ಎಸ್.ಅಮೀನ್ ಅವರು ವಿವಿಧ ಸಂಘಟನೆಗಳ ಸನ್ಮಾನ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
ವಿ4 ನ್ಯೂಸ್ 18ನೇ ವರ್ಷಾಚರಣೆಯ ಸಂಭ್ರಮದಲ್ಲಿ ಕೊಡಮಾಡುವ “ವಿ4 ನ್ಯೂಸ್ ಅವಾರ್ಡ್”ಗೆ ಶ್ರೀಮತಿ ಜಯಲತಾ ಎಸ್.ಅಮೀನ್ ಆಯ್ಕೆಯಾಗಿದ್ದು ಅನಾಥ ಮಕ್ಕಳ ಪಾಲನೆ-ರಕ್ಷಣೆಯ ಸಾಧನೆಯನ್ನು ಗುರುತಿಸಿ ವಿಶ್ವ ಬಿಲ್ಲವ ಮಹಿಳಾ ಸಂಘದ ವತಿಯಿಂದ ಇವರನ್ನು ಅಭಿನಂದಿಸಲಾಗಿತ್ತು.

50 k.g ಅಕ್ಕಿ ಹಾಗೂ ಕಾರ್ಡ್ಸ್ ಸಂವೇದನಾ ಸಂಸ್ಥೆಯ ಮಕ್ಕಳಿಗೆ ಅಗತ್ಯ ಉಡುಪುಗಳನ್ನು ವಿತರಿಸಲಾಯಿತು.
ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರ ತಾಯಿ ಯ ಸ್ಮರಣಾರ್ಥ ಒಂದು ವರ್ಷದ ಅವಧಿಗೆ ತಿಂಗಳಿಗೆ 50 k.g ಅಕ್ಕಿ ಹಾಗೂ ಕಾರ್ಡ್ಸ್ ಸಂವೇದನಾ ಸಂಸ್ಥೆಯ ಮಕ್ಕಳಿಗೆ ಅಗತ್ಯ ಉಡುಪುಗಳನ್ನು ವಿತರಿಸಲಾಯಿತು.
ಶೇ. 90 ಅಂಕ ಪಡೆದ ಸಂಘದ ಸದಸ್ಯೆಯರ ಪ್ರತಿಭಾನ್ವಿತ ಮಕ್ಕಳಿಗೆ
ಶೇ. 90 ಅಂಕ ಪಡೆದ ಸಂಘದ ಸದಸ್ಯೆಯರ ಪ್ರತಿಭಾನ್ವಿತ ಮಕ್ಕಳಿಗೆ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಇಂಜಿನಿಯರಿಂಗ್ ವಿದ್ಯಾರ್ಥಿ ಕುಮಾರಿ ಮೇಘ ಆರ್.ಪಿ. ಬಡಗ ಬೆಳ್ಳೂರು
ಇಂಜಿನಿಯರಿಂಗ್ ವಿದ್ಯಾರ್ಥಿ ಕುಮಾರಿ ಮೇಘ ಆರ್.ಪಿ. ಬಡಗ ಬೆಳ್ಳೂರು ಇವರಿಗೆ ಸಂಘದ ವತಿಯಿಂದ 25,000 ಸಹಾಯಧನ ನೀಡಲಾಯಿತು.