ಕೋವಿಡ್ -19 ಎರಡನೆಯ ಅಲೆಯ ಸಂದರ್ಭದಲ್ಲಿ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೊಳಗೊಂಡ ಮೂಡುಶೆಡ್ಡೆ, ಕುದ್ರೋಳಿ, ಕೂಳೂರು,ಕಾವೂರು,ಬಜಾಲ್,ಜಲ್ಲಿಗುಡ್ಡೆ,ಶಕ್ತಿನಗರ,ಮಾರಿಪಳ್ಳ,ಜಪ್ಪಿನಮೊಗರು, ಬಿಕರ್ನಕಟ್ಟೆ ಸುತ್ತಮುತ್ತಲಿನ ಪರಿಸರದ ಕುಟುಂಬಕ್ಕೆ ವಿಶ್ವಬಿಲ್ಲವ ಮಹಿಳಾ ಸಂಘದ ವತಿಯಿಂದ ಸುಮಾರು 350 ದಿನಸಿ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಅರ್ಹ ಫಲಾನುಭವಿಗಳ ಕುಟುಂಬಕ್ಕೆ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸಾಯಿರಾಂ ಶ್ರೀ ಪದ್ಮರಾಜ್, ಶೇಖರ ಪೂಜಾರಿ ಇವರ ಉಪಸ್ಥಿತಿಯಲ್ಲಿ ಕುದ್ರೋಳಿ ಕ್ಷೇತ್ರದಿಂದ ಆರಂಭಿಸಿ ನಂತರ ವಿವಿಧೆಡೆ ವಿತರಿಸಲಾಯಿತು . ಈ‌ ಸಂದರ್ಭದಲ್ಲಿ ವಿಜಯ ಅರುಣ್, ಶ್ರೀಲತ, ಸುಜಾತಸುವರ್ಣ, ಸುಮನ್ ಸುನಿಲ್,ಚಂಚಲಾ ತೇಜೋಮಯ,ಹೇಮನಿಸರ್ಗ ಮುಂತಾದವರು ಉಪಸ್ಥಿತರಿದ್ದರು.

ಕೋವಿಡ್ ಮೊದಲನೆ ಅಲೆ ಮತ್ತು ಎರಡನೆ ಅಲೆಯ ಸಂದರ್ಭದ ಸುಮಾರು ಮೂರು ಲಕ್ಷ ರೂಪಾಯಿಗಿಂತಲೂ ಅಧಿಕ ವೆಚ್ಚದ ಆಹಾರ ಕಿಟ್ ಗಳನ್ನು ವಿಶ್ವ ಬಿಲ್ಲವ ಮಹಿಳಾ‌ ಸಂಘದ ಅಧ್ಯಕ್ಷರ ಹಾಗೂ ಸದಸ್ಯೆಯರ ಸಹಕಾರದಿಂದ ವಿವಿದೆಡೆ ವಿತರಿಸಿದ ಸಂದರ್ಭ