9 ದಿನಗಳ ಕಾಲ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ನಡೆದ ಅನ್ನದಾನ ಸೇವೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ವಿಶ್ವಬಿಲ್ಲವ ಮಹಿಳಾ ಸಂಘ ಅಕ್ಟೋಬರ್ 2021 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ‌ ನಡೆಯುವ ಉತ್ಸವ ಸಂದರ್ಭದಲ್ಲಿ ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ ರವರ ಸಹಕಾರ ಹಾಗೂ ಸಂಘದ ಸದಸ್ಯರು ಹಾಗೂ ದಾನಿಗಳ ಸಂಪೂರ್ಣ ಬೆಂಬಲದೊಂದಿಗೆ ಕುದ್ರೋಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಎಲ್ಲಾ ದಿನದ ಅನ್ನದಾನದ ಸೇವೆಯ ವ್ಯವಸ್ಥೆ ಯನ್ನು ಈ ಬಾರಿ ವಿಶ್ವ ಬಿಲ್ಲವ ಮಹಿಳಾ ಸಂಘವು ಅತ್ಯಂತ ಜವಾಬ್ದಾರಿ ಹಾಗೂ ಅಚ್ಚುಕಟ್ಟಿನಿಂದ ಮಾಡಿರುತ್ತದೆ. ಅನ್ನದಾನ ಸೇವೆಗೆ ದಾನಿಗಳಿಂದ ಸುಮಾರು 3,73,713 ರೂಪಾಯಿಗಳಷ್ಟು ಧನಸಂಗ್ರಹವಾಗಿದ್ದುದು ಸಂಗ್ರಹ ಮೊತ್ತಕ್ಕೆ ಇನ್ನಷ್ಟು ಧನವನ್ನು ಅಧ್ಯಕ್ಷರು ತಮ್ಮ ಸ್ವಂತ ಖರ್ಚಿನಿಂದ ನೀಡಿ 9 ದಿನಗಳ ಕಾಲ‌ ನಡೆದ ಉತ್ಸವದಲ್ಲಿ ಮಹಿಳಾ ಸದಸ್ಯರು ನಿರಂತರವಾಗಿ ತಮ್ಮನ್ನು ತಾವೂ ತೊಡಗಿಸಿ ಅತ್ಯಂತ ಕಾಳಜಿಯಿಂದ ಸೇವೆಗಳನ್ನು ನೀಡಿರುತ್ತಾರೆ.