ವಿಶ್ವ ಬಿಲ್ಲವ ಮಹಿಳಾ ಸಂಘದ ಉದ್ಘಾಟನಾ ಸಮಾರಂಭ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ 16-02-2020 ರಂದು ಮಹಾ ಶಿವರಾತ್ರಿ ಪರ್ವ ಕಾಲದಲ್ಲಿ ಸನ್ಮಾನ್ಯ ಕೇಂದ್ರದ ಮಾಜಿ ಸಚಿವರು ಆದ ಬಿಲ್ಲವರ ಕಣ್ಮಣಿ ಶ್ರೀ ಜನಾರ್ದನ ಪೂಜಾರಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಮಾಲತಿ ಜೆ.ಪೂಜಾರಿಯವರ ದಿವ್ಯಹಸ್ತದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಂಪರ್ಕ- ಸಂಘಟನೆ – ಸಹಕಾರ ಎಂಬ ಧ್ಯೇಯವಾಕ್ಯಗಳೊಂದಿಗೆ ವಿಶ್ವಬಿಲ್ಲವ ಮಹಿಳಾ ಸಂಘವು ಅಸ್ತಿತ್ವಕ್ಕೆ ಬಂತು‌.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸಾಯಿರಾಮ್ ( ಅಧ್ಯಕ್ಷರು ಶ್ರೀ ಗೋಕರ್ಣನಾಥ ಕ್ಷೇತ್ರ), ಶ್ರೀ ಪದ್ಮರಾಜ್ ಆರ್ ( ಕೋಶಾಧಿಕಾರಿ ಶ್ರೀ ಗೋಕರ್ಣನಾಥ ಕ್ಷೇತ್ರ) ಶ್ರೀ ವೇದಕುಮಾರ್( ಅಧ್ಯಕ್ಷರು ಬೆಂಗಳೂರು ಬಿಲ್ಲವ ಸಂಘ) ಡಾ.ಅನಸೂಯಬಿ.ಸಾಲ್ಯಾನ್, ಕೆ.ಎ.ರೋಹಿಣಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ಬು ಉದ್ಛಾಡಿಸಿ ವಿಶ್ವಮಟ್ಟದಲ್ಲಿರುವ ಬಿಲ್ಲವ ಮಹಿಳೆಯರನ್ನು ಸೇರಿಸಿಕೊಂಡು ಈ ಸಂಘವೂ ಅಭಿವೃದ್ಧಿ ಕಾಣಲಿ ಎಂದು ಶುಭಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ವೇದಕುಮಾರ್ ಮಾತನಾಡಿ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಂಘದ ಮುಖೇನಾ ಪ್ರಾಬಲ್ಯವನ್ನು ಮೆರೆಯಲು ಸಹಕಾರಿಯಾಗಿ ಗುರುಗಳ ಮಾತಿನ ಆಶಯ ಈಡೇರಲಿ ಎಂದರು.
ಕುದ್ರೋಳಿ‌ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಮಾತನಾಡಿ ವಿಶ್ವಬಿಲ್ಲವ ಮಹಿಳಾ ಸಂಘವೂ ಶಿವರಾತ್ರಿ ಯ ಪರ್ವಕಾಲದಲ್ಲಿ ಆರಂಭವಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಈ ಸಂಘವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು.

ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ‌ ನಡೆದ ಈ ಸಭೆಯಲ್ಲಿ ವಿಶ್ವ ಬಿಲ್ಲವ ಮಹಿಳಾ ಸಂಘದ ನೂತನ ಪದಾಧಿಕಾರಿಗಳ ಆಯ್ಜೆಯೂ ನಡೆಯಿತು. ಅಧ್ಯಕ್ಷೆಯಾಗಿ ಹೋಟೇಲ್ ದೀಪಾ ಕಂಫರ್ಟ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್, ಉಪಾಧ್ಯಕ್ಷರಾಗಿ ಮ.ನ.ಪಾ ದ ಮಾಜಿ ಮೇಯರ್ ವಿಜಯ ಅರುಣ್, ಪ್ರಧಾನ ಕಾರ್ಯದರ್ಶಿಯಾಗಿ ಸುಜಾತ ಸುವರ್ಣ ಕೊಡ್ಮಾಣ್, ಕೋಶಾಧಿಕಾರಿಯಾಗಿ ಶ್ರೀಲತಾಗೋಪಾಲಕೃಷ್ಣ ಹಾಗೂ ಸಂಘದ ಸಲಹೆಗಾರರಾಗಿ ಗೌರವಾನ್ವಿತ ಹಿರಿಯ ವೈದ್ಯರಾದ ಡಾ.ಅನಸೂಯ ಬಿ.ಸಾಲ್ಯಾನ್ ಹಾಗೂ ಕೆ.ಎ.ರೋಹಿಣಿಯವರು ಆಯ್ಕೆಯಾದರು.

ವಿಶ್ವಬಿಲ್ಲವ ಮಹಿಳಾ ಸಂಘದ ಉದ್ಘಾಟನೆ