ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವ ಬಿಲ್ಲವ ಮಹಿಳಾ ಸಂಘದ ಸದಸ್ಯೆ ಮಮತಾ ಆಶ್ರಯ ಕಾಲೋನಿ ವಾಮಂಜೂರು ಇವರಿಗೆ ವಿಶ್ವಬಿಲ್ಲವ ಮಹಿಳಾ ಸಂಘದ ವತಿಯಿಂದ ರೂ.10, 000 ಧನಸಹಾಯದ ಚೆಕ್ ನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ನೀಡಿದರು. ಉಪಾಧ್ಯಕ್ಷರಾದ ವಿಜಯ ಅರುಣ್, ಪ್ರ.ಕಾರ್ಯದರ್ಶಿ ಸುಜಾತ ಸುವರ್ಣ, ಕೋಶಾಧಿಕಾರಿ ಮಮತಾಪ್ರವೀಣ್, ಸಲಹೆಗಾರರಾದ ಡಾ.ಅನಸೂಯಬಿ.ಸಾಲ್ಯಾನ್, ಕೆ.ಎ.ರೋಹಿಣಿ. ಜತೆ ಕಾರ್ಯದರ್ಶಿ ಸೌಮ್ಯ ವಸಂತ್, ಸುಮನ್ ಸುನಿಲ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

