ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಅನ್ನದಾನ ಸೇವೆಗೆ ₹4,33,560  ದೇಣಿಗೆ ಹಸ್ತಾಂತರ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ನಡೆದ ಅನ್ನದಾನ ಸೇವೆಗೆ ರೂ 4,33,560 ರೂಪಾಯಿಗಳನ್ನು ಸಂಗ್ರಹಿಸಿ ಶ್ರೀ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಜೈರಾಜ್ ಎಚ್. ಸೋಮಸುಂದರಂ ಅವರ ಕೈಗೆ ಹಸ್ತಾಂತರ ಮಾಡಲಾಯಿತು. ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್, ಉಪಾಧ್ಯಕ್ಷರಾದ ವಿಜಯ ಅರುಣ್, ಪ್ರಧಾನ ಕಾರ್ಯದರ್ಶಿ ಸುಜಾತ ಸುವರ್ಣ, ಕೋಶಾಧಿಕಾರಿ ಮಮತಾಪ್ರವೀಣ್, ನಾಗಾವೇಣಿ ರಮೇಶ್, ಶ್ರೀಲತಾ , ಸುಮಲತಾ, ಸೌಮ್ಯ, ವೀಕ್ಷಿತಾ, ಹೇಮಾ ನಿಸರ್ಗ,ಸಾಹಿತಿ, ಆಶಾ , ಜಯಶ್ರೀ ಉಳ್ಳಾಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.