ವಿಶ್ವ ಬಿಲ್ಲವ ಮಹಿಳಾ ಸಂಘ (ರಿ).
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು.
ಇದರ ಐದನೇ ವರ್ಷದ ವಾರ್ಷಿಕ ಕಾರ್ಯಕ್ರಮ
ಐಸಿರಿ-2025
ದಿನಾಂಕ 10-8-2025 ನೇ ಆದಿತ್ಯವಾರ ಬೆಳಿಗ್ಗೆ 9:30 ಹೋಟೆಲ್ ದೀಪಾ ಕಂಫರ್ಟ್ಸ್ ಸಭಾಂಗಣದಲ್ಲಿ ಜರಗಲಿರುವುದು.
ಈ ಕಾರ್ಯಕ್ರಮವನ್ನು ದೋಹಾ -ಕತಾರ್ ಬಿಲ್ಲವ ಸಂಘದ ಪ್ರಥಮ ಮಹಿಳಾಧ್ಯಕ್ಷರು ಆದ ಶ್ರೀಮತಿ ಅಪರ್ಣ ಶರತ್ ಇವರು ದೀಪ ಬೆಳಗಿ ಉದ್ಘಾಟಿಸಲಿದ್ದಾರೆ,
ಮುಖ್ಯ ಅತಿಥಿಯಾಗಿ ಡಾಕ್ಟರ್ ಅಪೂರ್ವ ಕಾರ್ತಿಕ್ ಭಾಗವಹಿಸಲಿದ್ದಾರೆ. ಶ್ರೀಮತಿ ಉರ್ಮಿಳಾ ರಮೇಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ MS general surgery ವಿಭಾಗದಲ್ಲಿ ರಾಜ್ಯಕ್ಕೆ ದ್ವೀತಿಯ ರ್ಯಾಂಕ್ ವಿಜೇತರಾದ ಡಾಕ್ಟರ್ ರಿತಿಕಾ ರಮೇಶ್,
CA ಪರೀಕ್ಷೆಯಲ್ಲಿ 1st. Attempt ನಲ್ಲಿ ತೇರ್ಗಡೆ ಹೊಂದಿರುವ ರಶ್ಮೀ ಕೆ.ಸುವರ್ಣ ಹಾಗೂ ಮಾಹೆ ವಿ.ವಿ.ಯಿಂದ ಪಿ.ಎಚ್.ಡಿ ಪಡೆದ ಡಾ.ಅಕ್ಷಿತಾ ಇವರನ್ನು ಸಂಘದ ವತಿಯಿಂದ ಗೌರವಿಸಲಾಗುವುದು. ನಂತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಜರಗಲಿರುವುದು. ಸಭಾ ಕಾರ್ಯಕ್ರಮ ಮುಗಿದ ನಂತರ ಸಂಘದ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು. ಬಿಲ್ಲವ ಸಮಾಜದ ಸದಸ್ಯ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲುಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಸುಜಾತ ಸುವರ್ಣ ಎಲ್ಲರಿಗೂ ಪ್ರೀತಿಯ ಆಹ್ವಾನ ನೀಡಿರುತ್ತಾರೆ.

