ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಶ್ರೀ ವಿಷ್ಣುಸಹಸ್ರನಾಮ ಪಠಣೆ ಹಾಗೂ ಹನುಮಾನ್ ಚಾಲೀಸಾ ಮಂತ್ರ ಪಠಣೆ ತರಬೇತಿ ಶಿಬಿರ ನಡೆಸಲಾಯಿತು. ಶಿವಗಿರಿ ಮಠದ ಸತ್ಯಾನಂದ ಸ್ವಾಮೀಜಿಯವರಿಂದ ಸತ್ಸಂಗ ಕಾರ್ಯಕ್ರಮವೂ ಜರುಗಿತ್ತು. ಮಕ್ಕಳಲ್ಲಿ ಅರಿವು ಮೂಡಿಸುವುದರ ಜೊತೆ ನಮ್ಮ ಸಂಸ್ಕ್ರತಿ , ಆಚಾರ ವಿಚಾರ ನಿತ್ಯಪೂಜಾ ಪದ್ಧತಿ, ಹಿರಿಯರನ್ನು ಗೌರವಿಸುವ ಬಗ್ಗೆ ನಡೆದ ಈ ಸತ್ಸಂಗದಲ್ಲಿ ಮನೆಯ ಹಿರಿಯರು
ಮಕ್ಕಳಲ್ಲಿ ಉತ್ಸಾಹ ತುಂಬಿ ಮಕ್ಕಳನ್ನು ಈ ಶಿಬಿರಕ್ಕೆ ಕರೆದುಕೊಂಡು ಬಂದು ತಾವೂ ಈ ಸತ್ಸಂಗದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.
ಮಕ್ಕಳಲ್ಲಿ ಜ್ಞಾನ ಭಂಡಾರವನ್ನು ಹೆಚ್ಚಿಸಲು ಲಕ್ಷ್ಮೀಶ ಇವರು ಹಾಗೂ ಸಹಸ್ರನಾಮ ಅಭ್ಯಸಿಸಲು ಸುಮತಿಬಾಳಿಗ ಇವರು ನಿತ್ಯ ಆಗಮಿಸಿ ಸಹಕರಿಸಿದರು. ಡಾ.ಅನಸೂಯ ಬಿ.ಸಾಲ್ಯಾನ್ ವಿಜಯ ಅರುಣ್, ಸುಜಾತ ಸುವರ್ಣ, ಶ್ರೀಲತಾಗೋಪಾಲಕೃಷ್ಣ ಇವರುಗಳು ಈ ಸತ್ಸಂಗ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದರು.





