ವಿಶ್ವ ಬಿಲ್ಲವ ಮಹಿಳಾ ಸಂಘ (ರಿ.)
ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ – ಮಂಗಳೂರು.
📍 ಕಛೇರಿ: ಬ್ರಹ್ಮ ಸಮಾಜ ಕಾಂಪ್ಲೆಕ್ಸ್, ನವಭಾರತ ಸರ್ಕಲ್, ಕೊಡಿಯಲ್ ಬೈಲ್, ಮಂಗಳೂರು-3
📞 8217874838 | 💬 8217874838
ಆತ್ಮೀಯರೇ,
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಸಂದೇಶದ ಪ್ರೇರಣೆಯಿಂದ,
“ಮಹಿಳೆಯಿಂದ – ಮಹಿಳೆಯರಿಗಾಗಿ – ಮಹಿಳೆಯರಿಗೋಸ್ಕರ”
ಎಂಬ ಧ್ಯೇಯದೊಂದಿಗೆ ವಿಶ್ವ ಬಿಲ್ಲವ ಮಹಿಳಾ ಸಂಘ (ರಿ.)
ಬಿಲ್ಲವ ಮಹಿಳಾ ಮಣಿಗಳನ್ನು ಗುರುತಿಸೋಣ
ಎಂಬ ಹೊಸ ಪರಿಕಲ್ಪನೆಯನ್ನು ಹೊಂದಿದ್ದು.
ಬಿಲ್ಲವ ಸಮುದಾಯದ ಮಹಿಳಾ ಶಿಕ್ಷಕಿಯರು, ವೈದ್ಯರು, ವಕೀಲೆಯರು, ಸಮಾಜಸೇವಕಿಯರು, ಉದ್ಯಮಿಗಳು, ಪಿ.ಎಚ್.ಡಿ ಪದವೀಧರರು, ಕ್ರೀಡಾಪಟುಗಳು, ರಾಜಕೀಯ-ಸಾಹಿತ್ಯ-ಕಲೆ, ಸಾಧಕಿಯರು, ಉದ್ಯೋಗಿಗಳು, ನಾಟಿವೈದ್ಯರು, ನರ್ಸ್ ಗಳು, ಕೃಷಿಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಉಜ್ವಲ ಸೇವೆ ಸಲ್ಲಿಸುತ್ತಿರುವ.
ಮಹಿಳೆಯರನ್ನು ಗುರುತಿಸಿ ಗೌರವಿಸಬೇಕು ಎನ್ನುವ ಮಹತ್ತರ ಕಾರ್ಯಕ್ಕೆ ಮುಂದಡಿ ಇಟ್ಟ ನಮ್ಮ ಜೊತೆ ಧನಾತ್ಮಕ ಚಿಂತನೆಯೊಂದಿಗೆ ಸಮುದಾಯದ ಎಲ್ಲಾ ಮಹಿಳೆಯರ ಸಂಪೂರ್ಣ ಸಹಕಾರ ಕೋರುತ್ತೇವೆ.
ನಿಮ್ಮ ಹೆಸರು/ಮಾಹಿತಿಯನ್ನು ಕೆಳಗಿನ ಲಿಂಕ್ ನಲ್ಲಿ ನೋಂದಾಯಿಸಿ:
👉 https://vishwabillavamahila.org/ಬಿಲ್ಲವ-ಮಹಿಳೆ-ಗುರುತಿಸೋಣ
ವಿ.ಸೂಚನೆ :- ನಿಮ್ಮ ಪರಿಚಯಸ್ಥ ಬಿಲ್ಲವ ಮಹಿಳೆಯರಿಗೂ ಹಂಚಿ, ಸಮಾಜಮುಖಿ ಕಾರ್ಯದಲ್ಲಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.
ಬನ್ನಿ ಸೋದರಿಯರೇ – ಬನ್ನಿ ಭಾಂಧವರೇ,
📌 ಮಹಿಳಾ ಮಣಿಗಳನ್ನು ಗುರುತಿಸೋಣ,
📌 ನಾರಿಶಕ್ತಿಯನ್ನು ಒಗ್ಗಟ್ಟಿನಿಂದ ಪ್ರದರ್ಶಿಸೋಣ,
📌 ಸಮಾಜದ ನವ ನಿರ್ಮಾಣಕ್ಕೆ ಹೆಜ್ಜೆ ಹಾಕೋಣ.
ನಮ್ಮಿಂದ – ನಮ್ಮವರಿಗಾಗಿ – ನಮ್ಮವರಿಗೋಸ್ಕರ
ಎನ್ನುತ್ತಾ ಎಲ್ಲರ ಸಹಕಾರ ಸದಾ ಇರಲಿ.
ವಂದನೆಗಳು. 🙏
